Sunday, August 16, 2009

ಆಟಿ ಜಾನಪದ-2



ಚೆನ್ನೆ ಮಣೆ ಆಟ ತುಳು ನಾಡಿನ ಜನಪ್ರಿಯವಾದ ಒಳಾಂಗಣ ಆಟ.

ಚೆನ್ನೆ ಮಣೆಯಲ್ಲಿ ೧೪ ಗುಳಿಗಳಿದ್ದು ಮಣೆಯ ಎಡ ಬಲಗಳ ಅಂಚುಗಳಲ್ಲಿ ಆಟವಾಡುವ ಕಾಯಿಗಳನ್ನು ಸಂಗ್ರಹಿಸಿಡಲು ಆಯತಾಕಾರದ ಪ್ರತ್ಯೇಕ ಎರಡು ಗುಳಿಗಳಿರುತ್ತವೆ. ಸುಮಾರು ಒಂದುವರೆಯಿಂದ ಎರಡಡಿ ಉದ್ದವಿರುವ ಮಣೆಯಿದು. ಎರಡು ಸಾಲಲ್ಲಿ ಏಳೇಳು ಗುಳಿಗಳು. ಏಳಕ್ಕಿಂತ ಹೆಚ್ಚು ಕಲ್ಲಿನ ಮಣೆಗಳೂ ಇವೆ.

ಈ ಆಟಕ್ಕೆ ಮಂಜೊಟ್ಟಿ ಮೊದಲಾದ ಕಾಯಿಗಳು ಬಳಕೆಯಾಗುತ್ತವೆ.
ಗುಲಗಂಜಿ , ಹೊಂಗೆ ಮರದ ಕಾಯಿ, ಹುಣಸೆ ಬೀಜ ಗಳನ್ನೂ ಬಳಸುತ್ತಾರೆ.

ಚೆನ್ನೆ ಆಟದಲ್ಲಿ ಚೆನ್ನೆ, ಪೆರ್ಗೆ, ಜೋಡು ಪೆರ್ಗೆ, ಸೀತೆ ಆಟ ಮೊದಲಾದ ವಿಧಗಳಿವೆ. ಯಾರೂ ಜೊತೆಗಿಲ್ಲದಾಗ ಒಬ್ಬರೇ ಆಟ ಆಡುತ್ತ ಬೇಸರ ಕಳೆಯಬಹುದಾದ ಆಟಕ್ಕೆ 'ಸೀತೆ ಆಟ' ಎಂದು ಹೆಸರು.

ಚೆನ್ನೆ ಮಣೆಗೆ ಅಟ್ಟುಗುಳಿ ಮಣೆ, ಹಳಗುಣಿ ಮಣೆ ಮೊದಲಾದ ಹೆಸರುಗಳಿವೆ.

ಫ್ರಿಕಾದಲ್ಲೂ ಚೆನ್ನೆಮಣೆ ಆಟ ಪ್ರಚಲಿತದಲ್ಲಿದೆ. ಅಲ್ಲಿ ಇದನ್ನು ಮಂಕಾಲ ಎನ್ನುತ್ತಾರೆ. ಆದರೆ ಅದರಲ್ಲಿ ಎರಡು ಸಾಲಿನ ಆರು ಗುಳಿಗಳು ಇರುತ್ತವೆ.

ಒಳಾಂಗಣ ಆಟವಾದರೂ ಹೊರಗಡೆ ದನ ಕರು ಮೇಯಿಸುತ್ತಿರುವಾಗ ಬಂಡೆಕಲ್ಲುಗಳ ಮೇಲೆ ಕೊರೆದುಮಾಡುವ ಗುಳಿಗಳಲ್ಲಿ ಈ ಆಟವನ್ನು ಆಡುವುದೂ ಇದೆ.

ಆಟಕ್ಕೆ ಈಗ ಗಾಜಿನ ಗೋಲಿಗಳು ಬಂದಿವೆ. ಅಲ್ಲದೆ ಚೆನ್ನೆಮಣೆ ಆಟವನ್ನು ಆಡಲು
internet ನಲ್ಲೂ ಸಾಫ್ಟ್ ವೇರ್ ಕೂಡ ಲಭ್ಯವಿದೆ.


1 comment:

  1. ನಮಸ್ಕಾರ ಸರ್, ಮರೆತೇ ಹೋಗುತ್ತಿರುವ ಇಂಥ ಜನಪದ ಆಟಗಳ ಕುರಿತು ಬರೆಯುವುದು ಒಳ್ಳೇದೇ. ನನಗಂತೂ ಓದೋದಕ್ಕೆ ಖುಷಿ. ಮತ್ತೊಮ್ಮೆ ಆ ಆಟಗಳನ್ನು ಆಡುತ್ತಿದ್ದ ದಿನಗಳಿಗೆ ಹೋಗಿ ಬಂದೆ. ಧನ್ಯವಾದಗಳು.

    ಚೆನ್ನೆಮಣೆ ಆಟ ಕೆಲವು ಮನೆಗಳಲ್ಲಿ ನಿಷೇಧಕ್ಕೆ ಒಳಗಾಗಿದೆ. ಅದನ್ನು ಆಡಿದರೆ ಮನೆಗೆ ಸರ್ವನಾಶ ಕಾದಿದೆ ಅನ್ನುವ ನಂಬಿಕೆ ಇದೆ. ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುತ್ತೀರ?

    ReplyDelete